ಓ ನನ್ನ ಚೇತನ ಟ್ರೈಲರ್ ರಿಲೀಸ್ ಮಾಡಿದ ಕ್ರೇಜಿಸ್ಟಾರ್ ವಿ.ರವಿಚಂದ್ರನ್. ತಮ್ಮ ಅಪೂರ್ವ ನಾಯಕಿ ಅಪೂರ್ವ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ರವಿಚಂದ್ರನ್. ಮಕ್ಕಳ ಚಿತ್ರದ ಟ್ರೈಲರ್ನ ಮಗುವಿನಂತೆ ರಿಲೀಸ್ ಮಾಡಿಕೊಟ್ಟ ರವಿಮಾಮ. ಓ ನನ್ನ ಚೇತನ ಟ್ರೈಲರ್ ಲಾಂಚ್ ವೇಳೆ ಪ್ರೇಮಲೋಕ, ಶಾಂತಿಕ್ರಾಂತಿಯ ಅದ್ಭುತ ಸನ್ನಿವೇಶಗಳನ್ನ ನೆನೆದ ರವಿಚಂದ್ರನ್. ಮೊಬೈಲ್ ನೋಡೋ ಮಕ್ಕಳು... ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ.