ಕಳೆದ 2-3 ದಿನಗಳಿಂದ ಬೆಂಗಳೂರು ನಗರದಲ್ಲಿ ಬಿಡುವು ನೀಡಿದ್ದ ಮಳೆರಾಯ ಮತ್ತೆ ಧರೆಗೆ ಇಳಿದಿದ್ದಾನೆ. ಬುಧವಾರ (ಅ.30) ಮಧ್ಯಾಹ್ನ ನಗರದ ಹಲವಡೆ ಮತ್ತೆ ಮಳೆಯಾಗಿದೆ. ಗುರುವಾರದಿಂದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಲು ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ಮಳೆಯಿಂದ ತೊಂದರೆಯಾಗಿದೆ.