ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಏನಾಗುತ್ತದೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಹಿಂದೆ ಬಂಗಾರಪ್ಪನವರ ಸರ್ಕಾರ ನ್ಯಾಯಾಲಯ ಆದೇಶ ಧಿಕ್ಕರಿಸಿದಾಗ ಸೇನಾ ಪಡೆ ಕಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು, ಅಂಥ ಸ್ಥಿತಿ ಉಂಟಾಗಲಿಲ್ಲ ಅದು ಬೇರೆ ವಿಷಯ. ಈ ಅತ್ಯಂತ ಬಿಕ್ಕಟ್ಟಿನ ಸ್ಥಿತಿಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಜೊತೆ ಸಹಕರಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಪರಮೇಶ್ವರ್ ಹೇಳಿದರು.