ಲೋಕಸಭಾ ಚುನಾವಣಾ ತರಬೇತಿಗೆಂದು 2,500 ಜನರನ್ನು ಸೇರಿಸಿದ್ದು, ಆದರೆ ಕಾರ್ಯಾಗಾರದಲ್ಲಿ ನೀರು, ಊಟ ಕೊಟ್ಟಿಲ್ಲ. ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲ ಅಂತಾ ಸರ್ಕಾರಿ ನೌಕರರು ಆರೋಪ ಮಾಡಿದ್ದಾರೆ. ಆರ್.ಆರ್.ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಚುನಾವಣಾ ತರಬೇತಿ ಕಾರ್ಯಾಗಾರ ವೇಳೆ ಘಟನೆ ಸಂಭವಿಸಿದೆ. ಈ ವೇಳೆ ಚುನಾವಣಾಧಿಕಾರಿ ಮತ್ತು ಸರ್ಕಾರಿ ನೌಕರರ ನಡುವೆ ಮಾತಿನ ಚಕಮಕಿ ಉಂಟಾಗಿದೆ.