ಕರ್ನಾಟಕದಲ್ಲಿ 30 ಸಾವಿರ ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ; ಸದನದಲ್ಲಿ ಅಮಿತ್ ಶಾ ಪ್ರಸ್ತಾಪ

ಮೋದಿ ಸರ್ಕಾರ ವೋಟ್ ಬ್ಯಾಂಕ್​ಗಾಗಿ ಕೆಲಸ ಮಾಡುವುದಿಲ್ಲ. ನಮ್ಮ ಸರ್ಕಾರ ದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳು ಅಲ್ಪಸಂಖ್ಯಾತರಿಗೆ ಪ್ರಚೋದನೆ ನೀಡುತ್ತಿವೆ. 1913-2013ರವರೆಗೆ ವಕ್ಫ್​ ಬೋರ್ಡ್​​ ಆಸ್ತಿ 18 ಲಕ್ಷ ಎಕರೆ ಇತ್ತು. 2013ರ ಬಳಿಕ 21 ಲಕ್ಷ ಎಕರೆ ವಕ್ಫ್​ ಬೋರ್ಡ್​ಗೆ ಸೇರ್ಪಡೆಯಾಗಿದೆ. ಈ ಮಸೂದೆಯಿಂದ ಸಾರ್ವಜನಿಕರ ಹೆಸರಿನಲ್ಲಿರುವ ನೈಜ ಸಂಪತ್ತು ಸುರಕ್ಷಿತವಾಗಿ ಇರಲಿದೆ ಎಂದು ಇಂದು ಸಂಜೆ ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.