ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯ ಶಾಸಕರು ಮತ್ತು ಸಂಸದರು ಸರ್ಕಾರದ ವಿರುದ್ಧ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ಮುನಿಸ್ವಾಮಿ ಮಾತುಗಳನ್ನು ಕೇಳಿ, ಅವರು ಮಾಡುತ್ತಿರುವ ಆರೋಪಗಳಲ್ಲಿ ಹತಾಶೆ ಬಿಟ್ಟರೆ ಬೇರೇನೂ ಕಾಣದು. ಲಕ್ಷ್ಮಿ ಹೆಬ್ಬಾಳ್ಕರ್ ನೂರಾರು ಕೋಟಿ ನುಂಗಿದ್ದಾರೆ ಅಂತ ಯಾವುದಾದರೂ ಆಧಾರವಿಟ್ಟುಕೊಂಡು ಹೇಳುತ್ತಿದ್ದಾರೆಯೇ ಅಥವಾ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆಯೇ ಅಂತ ಅನುಮಾನ ಮೂಡದಿರದು. ಸಚಿವೆ ಮಾನನಷ್ಟ ಮೊಕದ್ದಮೆ ಹೂಡಿದರೆ ಸಂಸದರು ನ್ಯಾಯಾಲಯಕ್ಕೆ ಪುರಾವೆ ಒದಗಿಸುತ್ತಾರೆಯೇ?