ಏರೋ ಇಂಡಿಯಾ 2025ರ ಏರ್ ಶೋ ಕಾರಣ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಕಿಲೋಮೀಟರ್ನಷ್ಟು ಉದ್ದ ಸಂಚಾರ ದಟ್ಟಣೆ ಉಂಟಾಗಿದೆ. ಬಾಗಲೂರು ಕ್ರಾಸ್ ಸ್ಕೈ ವಾಕ್ ಬಳಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ಕೂಡ ಪರದಾಡುವಂತಾಗಿದೆ. ಆದರೂ ಟ್ರಾಫಿಕ್ ಪೊಲೀಸರು ನೆರವಿಗೆ ಧಾವಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.