ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಅಧಿವೇಶನಕ್ಕೆ ನ್ಯಾಯ್ ಪಥ್ ಅಂತ ಹೆಸರಿಡಲಾಗಿದ್ದು, ಸಂಕಲ್ಪ, ಸಮರ್ಪಣೆ ಮತ್ತು ಸಂಘರ್ಷ ಟ್ಯಾಗ್ಲೈನ್ ಅಗಿದೆ. ಪಕ್ಷದ ಬಲವರ್ಧನೆ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವುದು, ಚುನಾವಣೆಗಳನ್ನು ನಿರ್ವಹಿಸುವ ಬಗೆ, ಮಾಧ್ಯಮಗಳ ಜೊತೆ ವರ್ತನೆ, ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆ ನಿರ್ವಹಿಸುವುದು ಮತ್ತು ಹೊಸ ಪದಾಧಿಕಾರಿಗಳಿಗೆ ಪಕ್ಷದ ತತ್ವ ಸಿದ್ಧಾಂತಗಳ ತರಬೇತಿ-ಮೊದಲಾದವುಗಳು ಅಧಿವೇಶನದ ಅಜೆಂಡಾ ಆಗಿವೆ.