ಇಂಜಿನೀಯರ್ ನಿಂದ ಪ್ರಮಾದ ಜರುಗಿದ್ದರೂ ಒಬ್ಬ ಸರಕಾರೀ ಅಧಿಕಾರಿಯನ್ನು ಸಾರ್ವಕನಿಕವಾಗಿ ಅಗಲೀ ಅಥವಾ ಖಾಸಗಿ ಪ್ರದೇಶದಲ್ಲಾಗಲಿ ಬಯ್ಯುವ ಅಧಿಕಾರ ಶಾಸಕ ಬಿಪಿ ಹರೀಶ್ ಗೆ ಇಲ್ಲ. ಅವರು ಯಾವ ಉದ್ದೇಶದಿಂದ ಅಧಿಕಾರಿಯ ಮೇಲೆ ಹಾಗೆ ರೇಗಾಡಿದ್ದರೋ ಸ್ಪಷ್ಟವಾಗುತ್ತಿಲ್ಲ. ತಮಗೆ ಬೇಡದ ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಿಸಲು ಶಾಸಕರು ಮತ್ತು ಸಂಸದರು ಇಂಥ ತಂತ್ರಗಳನ್ನು ಬಳಸೋದುಂಟು.