ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿರುವುದಾಗಿ ಹೇಳಿದ ಕುಮಾರಸ್ವಾಮಿ, ಅವರು ತನ್ನನ್ನು ಕೆಣಕುವ ಮಾತುಗಳನ್ನಾಡುತ್ತಿದ್ದಾರೆ, ಅವರಿಗೆ ಉತ್ತರಿಸುವ ಗೋಜಿಗೆ ತಾನು ಹೋಗುವುದಿಲ್ಲ, ಎಲ್ಲದಕ್ಕೂ ಚನ್ನಪಟ್ಟಣದ ಜನತೆ ಮತ್ತು ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.