ಪಾರಿವಾಳಗಳ ಹಿಕ್ಕೆಯಿಂದ ಮೈಸೂರು ಅರಮನೆಗೆ ಕಂಟಕ

ಮೈಸೂರು ಅರಮನೆಗೆ ಭೇಟಿ ನೀಡಿದಾಗ ಅಲ್ಲಿ ನೂರಾರು ಪಾರಿವಾಳಗಳನ್ನು ಕಾಣುತ್ತೇವೆ. ಬೆಳ್ಳಂಬೆಳಗ್ಗೆ ಈ ಪಾರಿವಾಳಗಳಿಗೆ ಅನೇಕರು ಕಾಳುಗಳನ್ನು ಹಾಕುತ್ತಾರೆ. ಆದರೆ ಕಾಳು ಹಾಕುವುದನ್ನು ನಿಲ್ಲಿಸಬೇಕೆಂದು ತಜ್ಞರು ಮನವಿ ಮಾಡಿದ್ದಾರೆ. ಏಕೆಂದರೆ ಈ ಪಾರಿವಾಳಗಳು ಹಾಕುವ ಹಿಕ್ಕೆಯಿಂದ ಅರಮನೆಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.