ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ

ಲಭ್ಯವಿರುವ ಮಾಹಹಿತಿಯೊಂದರ ಪ್ರಕಾರ ಮಾಜಿ ಸಚಿವ ನಾಗೇಂದ್ರ ಅವರ ಡೈರಿಯಲ್ಲಿ ಸಂಸದ ತುಕಾರಾಂ ಅವರ ಹೆಸರು ನಮೂದಾಗಿದ್ದು ಅದೇ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ 10ಕ್ಕೂ ಹೆಚ್ಚು ಅಧಿಕಾರಿಗಳು ಸಂಡೂರುನಲ್ಲಿರುವ ಸಂಸದನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯ ಮತ್ತೊಬ್ಬ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯ ಮನೆ ಮೇಲೂ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.