ದಾವಣಗೆರೆ: ಗೋಡೆ ಮೇಲಿಂದ ಜಿಗಿದು ಅತ್ಯಾಚಾರ ‌ಆರೋಪಿ ಪರಾರಿ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಅತ್ಯಾಚಾರ ‌ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾಗಿದ್ದಾನೆ. ದಾವಣಗೆರೆ ನಗರದ ಉಪ‌ಕಾರಾಗೃಹ ಗೋಡೆ ಮೇಲಿಂದ ಜಿಗಿದು ಆರೋಪಿ ಪರಾರಿಯಾಗಿದ್ದಾನೆ. ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಲಿಗೆ ಪೆಟ್ಟಾದ್ರು ಎಲ್ಲಿಯೂ ಕೂರದೆ ಕುಂಟುತ್ತಲೇ ಓಡಿ ಹೋಗಿ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ. ವಸಂತ್(23) ಪರಾರಿಯಾದ ಆರೋಪಿ.