ಸಿಎಂ ಸಿದ್ದರಾಮಯ್ಯ ರಾಜ್ಯ ಕಂಡ ಅದ್ಬುತ ರಾಜಕಾರಣಿ. ಒಂದಲ್ಲ ಎರಡು ಬಾರಿ ಸಿಎಂ ಆಗಿ ಮಿಂಚುಹರಿಸುತ್ತಿರುವ ಜನನಾಯಕ. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಕಷ್ಟು ಅವಮಾನ ಅಪಮಾನ ಸೋಲು ಗೆಲುವು ಕಷ್ಟಗಳ ಹಾದಿಯನ್ನು ಸವೆಸಿದ್ದಾರೆ. ಇನ್ನು ಸಿದ್ದರಾಮಯ್ಯ ಎಂದು ಗೆಲುವಿಗೆ ಬೀಗಿದವರಲ್ಲ ಸೋಲಿಗೆ ಕುಗ್ಗಿದವರಲ್ಲ. ಸಮಚಿತ್ತರಾಗಿ ಎಲ್ಲವನ್ನೂ ಸ್ವೀಕರಿಸಿ ಹೆದುರಿಸಿ ಮುಂದೆ ಹೆಜ್ಜೆ ಇಟ್ಟವರು. ಆದರೆ 2018ರಲ್ಲಿ ಸಿದ್ದರಾಮಯ್ಯ ಹಿರಿಯ ನಾಯಕ ಸಿದ್ದರಾಮಯ್ಯರ ಆಪ್ತ ಸ್ನೇಹಿತ ಜಿ ಟಿ ದೇವೇಗೌಡ ಅವರ ವಿರುದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲು ಸಿದ್ದರಾಮಯ್ಯ ಅವರನ್ನು ಬಿಡದೆ ಕಾಡುತ್ತಿದೆ. ತಮ್ಮ ಚಾಮುಂಡೇಶ್ವರಿ ಸೋಲಿನ ನೋವನ್ನು ಸಿದ್ದರಾಮಯ್ಯ ಸಾಕಷ್ಟು ಬಾರಿ ಹೊರಹಾಕಿದ್ದಾರೆ. ಆದರೆ ಸಿದ್ದರಾಮಯ್ಯ ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆದ ನಂತರ ಅದನ್ನು ಮರೆಯುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ ಎಲ್ಲರ ಊಹೆ ಸುಳ್ಳಾಗಿದೆ. ಸಿದ್ದರಾಮಯ್ಯ ಅವರು ಈಗಲೂ ಚಾಮುಂಡೇಶ್ವರಿ ಸೋಲಿನ ನೋವಿನಿಂದ ಹೊರಬಂದಿಲ್ಲ. ಬಹುಶಃ ಹೊರಬರುವುದು ಇಲ್ಲ. ಅವರ ರಾಜಕೀಯ ಜೀವನದಲ್ಲಿ ಚಾಮುಂಡೇಶ್ವರಿ ಸೋಲು ಮಾಗದ ಗಾಯವಾಗಿ ಉಳಿದು ಬಿಡಲಿದೆ.