ಚನ್ನಪಟ್ಟಣದ ಉಪ ಚುನಾವಣೆಯ ಬಗ್ಗೆ ಮಾತಾಡಲಿಚ್ಛಿಸದ ಯತ್ನಾಳ್, ಯೋಗೇಶ್ವರ್ ಬಿಜೆಪಿಯಲ್ಲಿದ್ದಾಗ ಟಿಕೆಟ್ ನೀಡಬೇಕೆಂದು ಹೇಳಿದ್ದು ಸತ್ಯ, ತಾನು ಪ್ರಚಾರಕ್ಕೆ ಹೋಗಿಲ್ಲ, ತಾನು ಸ್ಟಾರ್ ಪ್ರಚಾರಕ ಅಲ್ಲ, ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ್ದಾರೆ, ಫಲಿತಾಂಶದ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.