ಎದುರಾಳಿ ಯಾರೇ ಅಗಿದ್ದರೂ ಸದೆಬಡಿಯುವ ಶಕ್ತಿ ಸಾಮರ್ಥ್ಯ ಭಾರತಕ್ಕಿದೆ, ದೇಶದ ಭದ್ರತೆ ಮತ್ತು ದೇಶವಾಸಿಗಳ ರಕ್ಷಣೆ ವಿಷಯ ಬಂದಾಗ ಎಲ್ಲರೂ ಒಂದಾಗಬೇಕು ಮತ್ತು ಕೇಂದ್ರ ಸರ್ಕಾರಕ್ಕೆ ಹಾಗೂ ನಮ್ಮ ಸೇನಾಬಲಗಳಿಗೆ ಶಕ್ತಿ ತುಂಬಬೇಕು ಎಂದು ಶಿವಕುಮಾರ್ ಹೇಳಿದರು. ಪಹಲ್ಗಾಮ್ ದಾಳಿಗೆ ತಕ್ಕ ಪ್ರತೀಕಾರವನ್ನು ಭಾರತ ತೀರಿಸಿಕೊಂಡಿದೆ ಮತ್ತು ಅದರ ಅವಶ್ಯಕತೆ ಕೂಡ ಇತ್ತು ಎಂದು ಅವರು ಹೇಳಿದರು.