ಬೆಂಗಳೂರಿನ ವಾತಾವರಣಕ್ಕೂ ಬಳ್ಳಾರಿಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಬಳ್ಳಾರಿಗೆ ದರ್ಶನ್ ಹೊಂದಿಕೊಳ್ಳಲೇಬೇಕು ಎಂದು ಬಳ್ಳಾರಿ ಎಸ್.ಪಿ. ಶೋಭಾರಾಣಿ ಹೇಳಿದ್ದಾರೆ. ಜೈಲಿಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಇಲ್ಲಿಗೆ ಬಂದಮೇಲೆ ಅಡ್ಜೆಸ್ಟ್ ಆಗಲೇಬೇಕು. ನಾವು ಕೂಡ ಹೊರಗಡೆಯಿಂದ ಬಂದವರು’ ಎಂದು ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.