ಸ್ಪರ್ಧಿಗಳಿಗೆ ಹೊಡೆದು ಬಿಗ್​ ಬಾಸ್​ ಮನೆಯಿಂದ ಹೊರಬರಲು ವರ್ತೂರು ಸಂತೋಷ್​ ಪ್ಲ್ಯಾನ್​?

ಕಳೆದ ಎರಡು ದಿನಗಳಿಂದ ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಅವರೇ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಹೇಗಾದರೂ ಮಾಡಿ ತಾವು ಬಿಗ್​ ಬಾಸ್​ ಮನೆಯಿಂದ ಹೊರಗೆ ಹೋಗಬೇಕು ಎಂದು ಅವರು ತೀರ್ಮಾನಿಸಿದ್ದಾರೆ. ಆದರೆ ಅವರ ಮನವೊಲಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಹಾಗಿದ್ದರೂ ಕೂಡ ವರ್ತೂರು ಸಂತೋಷ್​ ಅವರು ದೊಡ್ಮನೆ ತೊರೆಯಲು ಏನೇನೋ ಪ್ಲ್ಯಾನ್​ ಮಾಡುತ್ತಿದ್ದಾರೆ. ‘ಎರಡು ದೊಡ್ಡ ಡ್ರೋನ್​ ತರಿಸು. ಅದರ ಮೇಲೆ ಕಾಲಿಟ್ಟುಕೊಂಡು ಹಾರಿ ಹೋಗ್ತೀನಿ’ ಎಂದು ಪ್ರತಾಪ್​ಗೆ ವರ್ತೂರು ಸಂತೋಷ್​ ಹೇಳಿದ್ದಾರೆ. ಅವರಿಗೆ ತುಕಾಲಿ ಸಂತೋಷ್​ ಕೂಡ ಒಂದಷ್ಟು ಐಡಿಯಾ ಕೊಟ್ಟಿದ್ದಾರೆ. ‘ನಿಮ್ಮನ್ನೆಲ್ಲ ಹೊಡೆದರೆ ಸಾಕು. ಅವರೇ ನನ್ನನ್ನು ಹೊರಗೆ ಕಳಿಸುತ್ತಾರೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ. ಈ ಮೂವರ ಸಂಭಾಷಣೆ ಇರುವ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್​ ವೀಕ್ಷಿಸಬಹುದು.