ಪೆನ್ ಡ್ರೈವ್ ಕೇಸ್​ನಲ್ಲಿ ಕಾಂಗ್ರೆಸ್ ರೂವಾರಿ: ದೇವರಾಜೇಗೌಡ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಸಂಬಂಧ ಹಾಸನ ಬಿಜೆಪಿ ನಾಯಕ ಹಾಗೂ ವಕೀಲ ದೇವರಾಜೇಗೌಡ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿ ಹೊರಹಾಕಿದ್ದಾರೆ. ಪೆನ್ ಡ್ರೈವ್ ಕೇಸ್​ನ ರೂವಾರಿಯೇ ಕಾಂಗ್ರೆಸ್ ಪಕ್ಷ. ಪೆನ್ ಡ್ರೈವ್​ನಲ್ಲಿರುವ ವಿಡಿಯೋಗಳನ್ನು ಲೀಕ್ ಮಾಡಿ ಹಲವರ ಮಾನ ಹರಾಜು ಮಾಡಿದೆ ಕಾಂಗ್ರೆಸ್. ಅಲ್ಲದೇ ಈ ಕೇಸ್ ಬಳಸಿ ಯಾರಾರನ್ನು ಫಿಟ್ ಮಾಡಿ ಮಟ್ಟ ಹಾಕಬೇಕೆಂದೂ ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನುವಂತಹ ಸಂಗತಿಯನ್ನು ದೇವರಾಜೇಗೌಡರು ತಿಳಿಸಿದ್ದಾರೆ.