ಬೀದರ್​ನಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಧಂದೆ: ಕಂಡು ಕಾಣದಂತೆ ಕುಳಿತ ಅಧಿಕಾರಿಗಳು

ಬೀದರ್​ ನಗರದ ಹೊರವಲಯದಲ್ಲಿರುವ ಮಲ್ಕಾಪುರ ಗ್ರಾಮದ ಬಳಿ ಪಕ್ಕದಲ್ಲಿಯೇ ಬೃಹತ್ ಗುಡ್ಡವನ್ನ ಕೊರೆದು ಅಕ್ರಮ ಕೆಂಪು ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಇಲ್ಲಿ ಅಕ್ರಮ ಮಣ್ಣು ಕೊರೆಯುವ ಕೆಲಸ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ.