ಶಾಲಾ ಅವರಣಗಳಲ್ಲಿ ಆತಂಕಿತ ಪೋಷಕರು

ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದಕ್ಕೂ ಬಾಂಬ್ ಬೆದರಿಕೆಯ ಮೇಲ್ ಹೋಗಿದೆ. ಕಳೆದ ವರ್ಷ ಇಂಥ ಘಟನೆ ನಡೆದಾಗ ಪೊಲೀಸರು ಯಾವ ಕ್ರಮ ತೆಗೆದುಕೊಂಡಿದ್ದರು ಅನ್ನೋದು ಗೊತ್ತಾಗಿಲ್ಲ. ಆಗಿನ ಕಿಡಿಗೇಡಿಗಳು ಅಥವಾ ವಿಘ್ನಸಂತೋಷಿಗಳನ್ನು ಕಠಿಣ ಶಿಕ್ಷೆಗೆ ಗುರಿಮಾಡಿದ್ದರೆ, ಪ್ರಾಯಶಃ ಘಟನೆಯ ಪುನರಾವರ್ತನೆ ಆಗುತ್ತಿರಲಿಲ್ಲ. ಇದು ಆಗಿನ ದುಷ್ಟರ ಕೃತ್ಯ ಆಗಿರುವ ಸಾಧ್ಯತೆಯೂ ಇದೆ.