ಬಾಗಲಕೋಟೆ ಗ್ರಾಮವೊಂದರಲ್ಲಿ ಎಳ್ಳು ಅಮವಾಸ್ಯೆ ಹಬ್ಬ ಆಚರಣೆ

ದೃಶ್ಯಗಳಲ್ಲಿ ಕಾಣುವ ಹಾಗೆ ಕುಟುಂಬಸ್ಥರು ವಿವಿಧ ಬಗೆಯ ಭಕ್ಷ್ಯಗಳನ್ನು ಮನೆಯಲ್ಲಿ ತಯಾರು ಮಾಡಿಕೊಂಡು ಬಂದಿದ್ದಾರೆ. ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಎಣ್ಣೆಗಾಯ್ ಸೇರಿದಂತೆ ಎರಡು-ಮೂರು ಬಗೆ ಪಲ್ಯಗಳು, ಮೊಸರು ಭಜ್ಜಿ, ಮೆಣಸಿನಕಾಯಿ ಭಜ್ಜಿ, ತುಪ್ಪ, ಹಾಲು, ಮೊಸರು, ಹಪ್ಪಳ-ಸಂಡಿಗೆ, ಅನ್ನ , ಆಂಬ್ರ (ಸಾಂಬಾರು) ಮೊದಲಾದವುಗಳನ್ನು ಒಟ್ಟಿಗೆ ಕೂತು ಸವಿಯಲಾಗುತ್ತಿದೆ.