ವಕ್ಫ್ ಭೂಕಬಳಿಕೆಗೆ ಸಂಬಂಧಿಸಿದಂತೆ ತಾನು ಸವಿಸ್ತಾರವಾಗಿ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಹೇಳಿದ ಅಶೋಕ, ಸರ್ಕಾರದ ಉತ್ತರವನ್ನು ಎದುರುನೋಡುತ್ತಿದ್ದೇವೆ ಎಂದರು. ಮಣಿಪ್ಪಾಡಿ ಅವರ ಹೇಳಿಕೆಗೆ ಆಪಾರ್ಥ ಕಲ್ಪಿಸಿರುವ ಕಾಂಗ್ರೆಸ್ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮೇಲೆ ₹ 150ಕೋಟಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಶೋಕ ಹೇಳಿದರು.