ರಜನಿಕಾಂತ್ ಹಾಗೂ ರಾಜ್ ಬಹದ್ದೂರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಪ್ರತಿ ಬಾರಿ ರಜನಿ ಸಿನಿಮಾ ರಿಲೀಸ್ ಆದಾಗಲೂ ರಾಜ್ ಬಹದ್ದೂರ್ ಚಿತ್ರವನ್ನು ವೀಕ್ಷಿಸುತ್ತಾರೆ. ಜೊತೆಗೆ ಸಿನಿಮಾ ಹೇಗಿದೆ ಎಂಬ ವಿಮರ್ಶೆ ನೀಡುತ್ತಾರೆ. ರಾಜ್ ಬಹದ್ದೂರ್ ನೀಡುವ ವಿಮರ್ಶೆ ಬಗ್ಗೆ ರಜನಿಗೆ ವಿಶೇಷ ಪ್ರೀತಿ. ‘ರಜನಿ ಬಳಿ ಬಂದು ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದೇ ಹೇಳುತ್ತಾರೆ. ಆದರೆ, ನಾನು ಮಾತ್ರ ನಿಜವಾದ ರಿವ್ಯೂ ಕೊಡುತ್ತೇನೆ. ಹೀಗಾಗಿ ರಜನಿ ಕರೆ ಮಾಡಿ ನನ್ ಮಗನೆ ಸಿನಿಮಾ ಹೇಗಿದೆ ಅಂತ ಹೇಳು ಎಂದಿದ್ರು’ ಎಂಬುದಾಗಿ ರಾಜ್ ಬಹದ್ದೂರ್ ಹೇಳಿದ್ದಾರೆ.