ಸತೀಶ್ ಮತ್ತು ಬೇರೆ 3-4 ಶಾಸಕರು ಶಾಪಿಂಗ್ ದುಬೈ ಹೋಗುತ್ತಿದ್ದಾರೆ, ಅವರ ಪ್ರವಾಸವನ್ನು ಸರ್ಕಾರವೇನೂ ಪ್ರಾಯೋಜಿಸುತ್ತಿಲ್ಲ ಮತ್ತು ಪಕ್ಷದ ಹಣದಲ್ಲೂ ಅವರು ಅಲ್ಲಿಗೆ ಹೋಗುತ್ತಿಲ್ಲ, ತಮ್ಮ ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ನಾಲ್ಕು ಜನ ಶಾಸಕರು ಜೊತೆಗೂಡಿ ಪ್ರವಾಸಕ್ಕೆ ಹೊರಟರೆ ಅದಕ್ಕೆ ವಿಪರೀತ ಆರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಹೇಳಿದರು.