ಕೇರಳದ ವಯನಾಡಿನಲ್ಲಿ ಉಂಟಾಗಿರುವ ಪ್ರವಾಹ, ಭೂಕುಸಿತದಲ್ಲಿ ಸಿಲುಕಿರುವವರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ನೂರಾರು ಕುಟುಂಬಗಳು ಕೊಚ್ಚಿಹೋಗಿದ್ದು, ಮೃತದೇಹಗಳನ್ನು ಪತ್ತೆಹಚ್ಚಲು ಕೂಡ ಕೆಲವು ಕುಟುಂಬಗಳಲ್ಲಿ ಯಾರೂ ಬದುಕುಳಿದಿಲ್ಲ. ಪ್ರವಾಸಿಗರ ಪಾಲಿನ ಸ್ವರ್ಗವಾಗಿದ್ದ ವಯನಾಡು ಸಂಪೂರ್ಣ ಕೊಚ್ಚಿಹೋಗಿ ಹೆಣಗಳಿಂದ ಆವೃತವಾದ ನರಕದಂತೆ ಕಾಣುತ್ತಿದೆ.