ರಾತ್ರಿಯಾಗುತ್ತಿದ್ದಂತೆ ನಾಯಿಗಳು ಆ ಏರಿಯಾವೆಲ್ಲ ತಮ್ಮದೇ ಎಂದುಕೊಂಡು ಬಿಡುತ್ತವೆ. ಅದೇರೀತಿ ರಾತ್ರಿ ವೇಳೆ ಬೀದಿನಾಯಿಗಳು ಗುಂಪಾಗಿ ಕುಳಿತಿದ್ದಾಗ ಚಿರತೆಯೊಂದು ರಸ್ತೆ ದಾಟುತ್ತಿತ್ತು. ಅದನ್ನು ನೋಡಿದ ನಾಯಿಗಳು ಬೆಕ್ಕು ಎಂದು ಭಾವಿಸಿ ದಾಳಿ ಮಾಡಲು ಜೋರಾಗಿ ಬೊಗಳುತ್ತಾ ಹೋಗಿವೆ. ಬಳಿಕ ಅದು ಚಿರತೆ ಎಂದು ಗೊತ್ತಾಗುತ್ತಿದ್ದಂತೆ ವಾಪಾಸ್ ಓಡಿಬಂದಿವೆ.