ಕಲ್ಲುಕ್ವಾರಿ ಸರ್ವೆಗೆ ತೆರಳಿದ್ದ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆಗೆ ಯತ್ನ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಂಕಾಪುರದಲ್ಲಿ ಜಮೀನಿನ ಸಮೀಕ್ಷೆಗೆ ತೆರಳಿದ್ದ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ. ಗಣಿ ಇಲಾಖೆ ಅಧಿಕಾರಿಗಳು ಕಲ್ಲುಕ್ವಾರಿ ಬಗ್ಗೆ ಸರ್ವೆಗೆ ಮುಂದಾದ ವೇಳೆ ಬಂಕಾಪುರ ಗ್ರಾಮದ ಬೋರೇಗೌಡ ಕುಟುಂಬಸ್ಥರಿಂದ ಈ ಹೈಡ್ರಾಮಾ ನಡೆದಿದೆ.