‘ತಾಯ್ತ’ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಛ, ರಿಯಾನ್, ಸಾಧು ಕೋಕಿಲ, ಲಯ ಕೋಕಿಲ, ಶಾಹಿದ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಇದೊಂದು ಹಾಹರ್ ಸಿನಿಮಾ. ಈ ಸಿನಿಮಾ ಶೂಟಿಂಗ್ ಅನುಭವಗಳ ಬಗ್ಗೆ ಹರ್ಷಿಕಾ ಮಾತನಾಡಿದ್ದಾರೆ. ‘ನಾವು ಮನೆ ಒಂದರಲ್ಲಿ ಎರಡು ತಿಂಗಳು ಶೂಟ್ ಮಾಡಿದ್ದೆವು. ಅಲ್ಲಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಹರ್ಷಿಕಾ ಮಾಹಿತಿ ನೀಡಿದರು. ಬಳಿಕ ಚಿತ್ರತಂಡದವರು ‘ನಾಲ್ಕಲ್ಲ ಹದಿನೇಳು’ ಎಂದು ಅಸಲಿ ವಿಚಾರ ಹೇಳಿದರು. ಇದನ್ನು ಕೇಳಿ ಹರ್ಷಿಕಾ ಕೊಂಚ ಭಯಗೊಂಡರು.