ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಾಡಾನೆ ದಾಂಧಲೆ ನಡೆಸಿದೆ. ಮನೆ ಹಿಂಭಾಗದ ಕಟ್ಟಡ, ದನದ ಕೊಟ್ಟಿಗೆಯನ್ನು ಕಾಡಾನೆ ಉಡೀಸ್ ಮಾಡಿದೆ. ಅಷ್ಟೇ ಅಲ್ಲದೆ, ತೋಟವನ್ನೂ ನಾಶಪಡಿಸಿವೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.