ಹಾನಗಲ್ ತಾಲೂಕಿನ ಆಡೂರಿನ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ, ಗೊರವಯ್ಯ ಎಂಬವರು ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಎಂದು ದೈವವಾಣಿ ನುಡಿದಿದ್ದಾರೆ. ಇದು ಪ್ರಸಕ್ತ ವರ್ಷ ಉತ್ತಮ ಮಳೆಯಾಗುವುದು ಮತ್ತು ಬೆಳೆಗಳು ಸಮೃದ್ಧವಾಗಿ ಬರುವುದರ ಸೂಚನೆ ಎಂದು ಗ್ರಾಮಸ್ಥರು ನಂಬಿದ್ದಾರೆ. 12 ಅಡಿ ಎತ್ತರದ ಬಿಲ್ಲೇರಿನ ಮೇಲೆ ಈ ಭವಿಷ್ಯವಾಣಿ ನಡೆದಿದೆ.