ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಮುಖ್ಯಮಂತ್ರಿ ಬದಲಾವಣೆ ಆಗೋದು ನಿಶ್ಚಿತ, ಅದಕ್ಕಾಗಿ ದಿನಾಂಕ ಕೂಡ ನಿಗದಿಯಾಗಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಅಶೋಕ ತಾನೊಬ್ಬ ಜ್ಯೋತಿಷಿ ಅಂತ ಫಲಕ ಹಾಕಿಕೊಂಡಿರವಂತಿದೆ, ತನಗೂ ಜ್ಯೋತಿಷ್ಯದ ಬಗ್ಗೆ ಖಯಾಲಿ, ಪುರುಸೊತ್ತು ಮಾಡಿಕೊಂಡು ಅವರ ಬಳಿ ಒಮ್ಮೆ ಹೋಗುತ್ತೇನೆ ಎಂದರು.