ಗದಗಿನ ಬೇಕರಿಯೊಂದರಲ್ಲಿ ಹೊಸವರ್ಷಕ್ಕಾಗಿ ಬಗೆಬಗೆಯ ಕೇಕ್​​ಗಳು

ಬೇಕರಿಯ ಮಾಲೀಕ ಟಿವಿ9 ವರದಿಗಾರನೊಂದಿಗೆ ಒಲ್ಲದ ಮನಸ್ಸಿನಿಂದ ಮಾತಾಡಿದ್ದು ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇಕ್ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ ಸಾಯಂಕಾಲದ ಸಮಯದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಬಹುದೆಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದಾರೆ. ಇದು ತಿಂಗಳು ಕೊನೆ ನಿಜ ಆದರೆ ಜನ ಹೊಸ ವರ್ಷದ ಆಚರಣೆಗಾಗಿ ಹಣವನ್ನು ತೆಗೆದಿಟ್ಟಿರುತ್ತಾರೆ.