ಇಂಥ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಸರ್ಕಾರ ವಿಶೇಷ ಕೊರ್ಟ್ ಗಳನ್ನು ಸ್ಥಾಪಿಸುತ್ತಿದೆ ಮತ್ತು ಮೀನಾ ಪ್ರಕರಣದ ವಿಚಾರಣೆಗೂ ಒಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು. ಮೀನಾಳ ಕುಟುಂಬದ ಸ್ಥಿತಿಯನ್ನು ನೋಡಲಾಗಲ್ಲ, ಮನೆಯಲ್ಲಿ ಬಹಳ ಬಡತನವಿದೆ, ಈ ಕುಟುಂಬದ ಜೊತೆ ಇಷ್ಟು ದೊಡ್ಡ ಅನ್ಯಾಯ ಜರುಗಬಾರದಿತ್ತು ಎಂದು ಪರಮೇಶ್ವರ್ ಹೇಳಿದರು.