ಎಸ್ಪಿ, ಡಿಸಿಪಿ, ಐಜಿ ಮತ್ತು ಪೊಲೀಸ್ ಕಮೀಶನರ್ ಱಂಕಿನ ಅಧಿಕಾರಿಗಳು ಪ್ರತಿದಿನ ಒಂದು ಠಾಣೆಗೆ ಭೇಟಿ ನೀಡಿ ಅದರ ವ್ಯಾಪ್ತಿಯೊಳಗೆ ಬರುವ ನಿವಾಸಿಗಳ ಜೊತೆ ಮಾತಾಡಬೇಕು ಮತ್ತು ಅವರ ದೂರು ದುಮ್ಮಾನಗಳನ್ನು ಆಲಿಸಬೇಕು ಎಂದು ಮುಖ್ಯಮಂತ್ರಿಯವರು ಪೊಲೀಸ್ ಅಧಿಕಾರಿಗಳಿಗೆ ಹೇಳಿರುವುದು ಸ್ವಾಗತಾರ್ಹ. ಆದರೆ ಅಧಿಕಾರಿಗಳು ಇದನ್ನು ಪಾಲಿಸುವರೆ? ಅವರನ್ನು ಮಾನಿಟರ್ ಮಾಡೋರು ಯಾರು?