ರಸ್ತೆಯಲ್ಲಿ ಉಕ್ಕಿ ಹರಿಯುತ್ತಿರುವ ಡ್ರೈನೇಜ್ ವಾಟರ್

ಬೊಮ್ಮನಹಳ್ಳಿ ವೃತ್ತದ ಸರ್ವೀಸ್ ರಸ್ತೆಯ ಬಿಬಿಎಂಪಿ ಕಚೇರಿ ಸಮೀಪವೇ ಅವ್ಯವಸ್ಥೆ ಕಂಡುಬಂದಿದೆ. ಡ್ರೈನೇಜ್ ಕೊಳಚೆ ನೀರು ರಸ್ತೆಯಲ್ಲಿ ಹರಿದಿದ್ದರಿಂದ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಸಮಸ್ಯೆ ಎದುರಿಸಿದ್ದಾರೆ. ಮೆಟ್ರೋ ಕಾಮಗಾರಿ ಮಾಡುವ ಸಂದರ್ಭದಲ್ಲಿ ಚರಂಡಿ ಮುಚ್ಚಿ ಹೋಗಿದ್ದು, ಬೊಮ್ಮನಹಳ್ಳಿ ವೃತ್ತ ಮಾರ್ಗವಾಗಿ ಹೋಗಬೇಕಿದ್ದ ಕೊಳಚೆ ನೀರು ರಸ್ತೆಯಲ್ಲಿ ಹರಿದಿದೆ.