ನೀರಿಗಾಗಿ ಅಲೆದು ಮರಿ ಆನೆಯೊಂದು ನಿತ್ರಾಣಗೊಂಡಿರುವಂತಹ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ. ನೀರು ಅರೆಸಿ ಊರಿನ ಕಡೆ ಬರುವಾಗ ನಿತ್ರಾಣಗೊಂಡು ಆನೆ ಮರಿ ಬಿದ್ದಿದೆ. ನಿತ್ರಾಣಗೊಂಡ ಆನೆ ಮರಿಯನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ನೀರು ಕುಡಿಸಿ ಉಪಚರಿಸಿದ್ದಾರೆ.