ಜೆಸ್ಕಾಂ ಆ ಭಾಗದ ರೈತರಿಗೆ ಬೆಳಗಿನ ಜಾವ 4 ಗಂಟಗೆ ತ್ರೀ ಫೇಸ್ ಕರೆಂಟ್ ನೀಡುತ್ತಿದೆ. ಹೀಗಾಗಿ ಜಮೀನುಗಳಿಗೆ ನೀರು ಬಿಡಲು ಹೋದಾಗ ನದಿ ಪಾತ್ರದ ರೈತರಿಗೆ ಮೊಸಳೆಗಳ ಕಾಟ ಶುರುವಾಗಿದ್ದು, ಜಮೀನಿಗೆ ನೀರು ಬಿಡಲು ಬಂದ ರೈತನ ಮೇಲೆ ಮೊಸಳೆ ದಾಳಿಗೆ ಮುಂದಾಗಿತ್ತು. ಅದೃಷ್ಟವಶಾತ್ ರೈತ ಪರಾಗಿದ್ದು, ರೊಚ್ಚಿಗೆದ್ದ ರೈತರು ಜಮೀನಿಗೆ ನುಗ್ಗಿದ್ದ ಮೊಸಳೆಯನ್ನೆ ಹಿಡಿದು ಜೆಸ್ಕಾಂ ಕಚೇರಿಗೆ ತಂದು ಆಕ್ರೋಶ ಹೊರಹಾಕಿದ್ರು.