ಕೆ.ಆರ್.ಮಾರ್ಕೆಟ್​ನಿಂದ ಟೌನ್​ಹಾಲ್​​ವರೆಗೆ ಟ್ರಾಫಿಕ್ ಜಾಮ್

ನವರಾತ್ರಿ ಆಯುಧ ಪೂಜೆ ಹಿನ್ನೆಲೆಯಲ್ಲಿ ಕೆ.ಆರ್​.ಮಾರ್ಕೆಟ್​​ನಲ್ಲಿ ಹೂ, ಹಣ್ಣು, ಬಾಳೆಕಂದು ಸೇರಿ ಅಗತ್ಯವಸ್ತು ಖರೀದಿ ಭರಾಟೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಟೌನ್​ಹಾಲ್​ ಕಡೆಯಿಂದ ಮಾರ್ಕೆಟ್ ಹೋಗುವ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಆಗಿದೆ.