ಸ್ವರ್ಣ ನದಿಯಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ ಮೂಕಾಂಬಿಕೆಯನ್ನು ಬೇಡಿಕೊಂಡಿದ್ದಕ್ಕೆ ಅರ್ಧ ಗಂಟೆಯಲ್ಲಿ ಸಿಕ್ತು!

ನದಿಯಲ್ಲಿ ಈಜಲು ಹೋಗಿ ಚಿನ್ನದ ಸರ ಕಳೆದುಕೊಂಡು ದಿಕ್ಕೇ ತೋಚದಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಪ್ರಾರ್ಥಿಸಿದ ಅರ್ಧ ಗಂಟೆಯಲ್ಲೇ ಚಿನ್ನದ ಸರ ಸಿಕ್ಕಿರುವ ಘಟನೆ ಪರ್ಕಳದ ಹೆರ್ಗ ಗ್ರಾಮದಲ್ಲಿ ನಡೆದಿದೆ. ಮಲ್ಪೆ ಮೂಲದ ಕಿಶನ್ ಕೋಟ್ಯಾನ್ ಮಣಿಪಾಲ ಎಂಐಟಿಯಲ್ಲಿ ವಿದ್ಯಾರ್ಥಿ ಈತ. ಸ್ನೇಹಿತರೊಂದಿಗೆ ಸ್ವರ್ಣ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಮೂರು ಲಕ್ಷ ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದ.