ತಾವೆಲ್ಲ ಒಟ್ಟಿಗೆ ಸೇರಿ ಊಟ ಮಾಡೋದು ಸಹ ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗಿಲ್ಲ. ಅನಾವಶ್ಯಕವಾಗಿ ವಿಷಯವನ್ನು ಹಿಗ್ಗಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಒಂದು ಸರಳ ಔತಣ ಕೂಟಕ್ಕೆ ಅಡಚಣೆ ಉಂಟು ಮಾಡಿದೆ ಎಂದು ಅಶ್ವಥ್ ನಾರಾಯಣ ಹೇಳಿದರು. ತಾವು ಜೊತೆಗೂಡಿ ಊಟ ಮಾಡುವುದು ಕಾಂಗ್ರೆಸ್ ನಾಯಕರಿಗೆ ನೋಡಲಾಗುತ್ತಿಲ್ಲವಲ್ಲ ಅಂತ ಔತಣ ಕೂಟವನ್ನೇ ರದ್ದುಮಾಡಿದ್ದೇವೆ, ಅವರಿಗೆ ಈಗ ಖುಷಿಯಾಗಿರಬಹುದು ಎಂದು ಬಿಜೆಪಿ ಶಾಸಕ ಹೇಳಿದರು.