ಉತ್ಸಾಹದಿಂದ ಬೀಗುತ್ತಿರುವ ಜನ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಗರದ ಹಲವಾರು ಭಾಗಗಳಲ್ಲಿ ಜನ ರಸ್ತೆಗಳಿಗೆ ಬಂದು ಕುಣಿಯುತ್ತಿದ್ದಾರೆ ಮತ್ತು ಸಿಹಿ ಹಂಚುತ್ತಿದ್ದಾರೆ. ಟೀಂ ಇಂಡಿಯಾ ಐಸಿಸಿ ವಿಶ್ವಕಪ್ ಗೆದ್ದಾಗ ದೇಶದಲ್ಲಿ ಉಟಾಗುವ ಸನ್ನಿವೇಶ ಇವತ್ತು ಇಸ್ರೋ ವಿಜ್ಞಾನಿಗಳ ಯಶಸ್ಸಿನ ಹಿನ್ನೆಲೆಯಲ್ಲಿ ಕಂಡುಬರುತ್ತಿದೆ.