ಅಭಿಮಾನಿಗಳ ಒತ್ತಾಯಕ್ಕೆ ‘ಘೋಸ್ಟ್​’ ಚಿತ್ರದ ಡೈಲಾಗ್ ಹೇಳಿದ ಶಿವರಾಜ್​ಕುಮಾರ್

ನಟ ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ನವರಾತ್ರಿಯಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ‘ಬಿಗ್ ಡ್ಯಾಡಿ’ ಹೆಸರಲ್ಲಿ ಈ ಟೀಸರ್ ಮೂಡಿಬಂದಿದೆ. ಶಿವಣ್ಣ ಹೇಳಿಡ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆಯುತ್ತಿದೆ. ಬರ್ತ್​ಡೇ ದಿನ (ಜುಲೈ 12) ನಡೆದ ಸುದ್ದಿಗೋಷ್ಠಿಯಲ್ಲಿ ಶಿವರಾಜ್​ಕುಮಾರ್ ಅವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಬರುವ ಖಡಕ್ ಡೈಲಾಗ್​​ನ ಹೇಳಿದ್ದಾರೆ.