ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರ ಬೀಗರೂಟ ಕಾರ್ಯಕ್ರಮ ಜೂನ್ 16ರಂದು ಮಂಡ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಬಂದು ಊಟ ಮಾಡಿ ತೆರಳಿದ್ದಾರೆ. ಆದರೆ, ಕೆಲವರು ಅಡುಗೆ ಮಾಡುತ್ತಿದ್ದ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದಾರೆ. ಇದರಿಂದ ಸಾಕಷ್ಟು ಆಹಾರ ವೇಸ್ಟ್ ಆಗಿದೆ. ಈ ಬಗ್ಗೆ ಅಭಿಷೇಕ್ ಅಂಬರೀಷ್ ಅವರು ಬೇಸರ ಹೊರಹಾಕಿದ್ದಾರೆ. ‘ಬಂದಷ್ಟೂ ಜನರಿಗೆ ಊಟ ಬಡಿಸಿ ಎಂದು ನಾವು ಹೇಳಿದ್ದೆವು. ಆದರೆ, ಕೆಲವರು ಬಂದ ತೊಂದರೆ ಮಾಡಿದರು. ಇದರಿಂದ ಸಾಕಷ್ಟು ಊಟ ವೇಸ್ಟ್ ಆಯಿತು. ಆ ಬಗ್ಗೆ ಬೇಸರ ಇದೆ’ ಎಂದಿದ್ದಾರೆ ಅಭಿಷೇಕ್.