ವಿಮಾನ ರನ್​ ವೇನಲ್ಲಿ ಇಳಿಯುವಾಗ ಅಡ್ಡ ಬಂದೇ ಬಿಡ್ತು ಮತ್ತೊಂದು ವಿಮಾನ

ಚಿಕಾಗೋದ ಮಿಡ್‌ವೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಸೌತ್ ವೆಸ್ಟ್​ ವಿಮಾನವು ಇಳಿಯಲು ಪ್ರಯತ್ನಿಸುತ್ತಿರುವಾಗ ಮತ್ತೊಂದು ವಿಮಾನ ಅಡ್ಡ ಬಂದ ಹಿನ್ನೆಲೆಯಲ್ಲಿ ಕೂಡಲೇ ಪೈಲಟ್ ಆ ವಿಮಾನವನ್ನು ಸಂಪೂರ್ಣವಾಗಿ ಕೆಳಗಿಳಿಸಿದೇ ಮತ್ತೆ ಆಕಾಶಕ್ಕೆ ಹಾರಿಸಿ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ.