ಬಾಗಲಕೋಟೆ: ಕೃಷ್ಣಾ ನದಿ ನೀರು ಖಾಲಿಯಾದ ಹಿನ್ನೆಲೆ ನದಿ ಪಾತ್ರದಲ್ಲಿ ಮೊಸಳೆ ಹಾವಳಿ ಶುರುವಾಗಿದೆ. ಜಿಲ್ಲೆ ಬೀಳಗಿ ತಾಲ್ಲೂಕಿನ ಕೊಂತಿಕಲ್ ಗ್ರಾಮದ ಬಳಿ ಸುಮಾರು 9 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ. ಆಹಾರ ಅರಸಿ ಬಂದ ಮೊಸಳೆ ರಸ್ತೆ ಬದಿ ಮೇಯುತ್ತಿದ್ದ ಮೇಕೆ ಮೇಲೆ ದಾಳಿ ಮಾಡಿದೆ. ಮೊಸಳೆ ಕಂಡ ಗ್ರಾಮಸ್ಥರು ಜೆಸಿಬಿ ಬಳಸಿ ಕಟ್ಟಿ ಹಾಕಿದ್ದರು.