ತುಳು ಚಿತ್ರರಂಗದಲ್ಲಿ ಹೊಸ ಪ್ರಯತ್ನ ಮಾಡಲಿದ್ದಾರೆ ರಾಜ್ ಬಿ. ಶೆಟ್ಟಿ

ತುಳು ಚಿತ್ರರಂಗದಲ್ಲಿ ಹಲವು ಸಿನಿಮಾಗಳು ತೆರೆಗೆ ಬರುತ್ತವೆ. ಇವುಗಳಲ್ಲಿ ಬಹುತೇಕವು ಹಾಸ್ಯ ಪ್ರಧಾನ ಸಿನಿಮಾ. ಅರವಿಂದ್ ಬೋಳಾರ್ ಸೇರಿ ಅನೇಕ ಕಲಾವಿದರು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ. ರಾಜ್ ಬಿ. ಶೆಟ್ಟಿ ಮಂಗಳೂರಿನವರು. ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಟೋಬಿ’ ಮೂಲಕ ಅವರು ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗ ರಾಜ್ ಬಿ. ಶೆಟ್ಟಿ ಅವರು ತುಳು ಸಿನಿಮಾ ನಿರ್ಮಾಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ‘ತುಳುವಿನಲ್ಲಿ ಸಿನಿಮಾ ಒಂದನ್ನು ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೀನೆ. ಅಲ್ಲಿರುವ ಏಕತಾನತೆ ಬ್ರೇಕ್ ಮಾಡಬೇಕು ಅನ್ನೋದು ಉದ್ದೇಶ. ಹೀಗಾಗಿ, ಗಂಭೀರ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ಇದೆ’ ಎಂದಿದ್ದಾರೆ ಅವರು.