ಉತ್ತರಾಖಂಡ್ ಬಿಜೆಪಿ ಶಾಸಕರ ರ್ಯಾಲಿಯಲ್ಲಿ ಮಹಿಳೆಯರು ನೀರಿಗಾಗಿ ಬೇಡಿಕೆ ಇಟ್ಟರು. ಆಗ ಆ ಶಾಸಕ ಅವರಿಂದ "ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ" ಎಂದು ಘೋಷಣೆಗಳನ್ನು ಕೂಗಿಸಿದ್ದಾರೆ. ಇದು ದೇವಪ್ರಯಾಗ ಕ್ಷೇತ್ರದ ಬಿಜೆಪಿ ಶಾಸಕ ವಿನೋದ್ ಕಂಧಾರಿ ಅವರ ರ್ಯಾಲಿಯಾಗಿತ್ತು. ಶಾಸಕರು ತಮ್ಮ ಭಾಷಣ ಮುಗಿಸಿದ ನಂತರ ದುಃಖಿತ ಮಹಿಳೆಯರ ಗುಂಪಿನೊಂದಿಗೆ ಹಾಜರಿದ್ದರು. ವೀಡಿಯೊದಲ್ಲಿರುವ ಮಹಿಳೆಯರು ತಮ್ಮ ಸಮಸ್ಯೆಗಳನ್ನು ವಿವರಿಸುವುದನ್ನು ಕಾಣಬಹುದು.