ಸದನದಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಸುನೀಲ ಕುಮಾರ

ಸುನೀಲ ಕುಮಾರ ಯಾವ ವಿಷಯದ ಬಗ್ಗೆ ಚರ್ಚೆಯಾಗಬೇಕು ಅಂತ ನಿಮ್ಮಿಂದ ತಿಳಿಯುವ ಅವಶ್ಯಕತೆ ನಮಗಿಲ್ಲ, ನಮಗೆ ಸಲಹೆ ನೀಡುವ ಸಾಹಸ ಮಾಡಬೇಡಿ ಅಂತ ಹೇಳಿದ ಬಳಿಕ ಸ್ಪೀಕರ್ ಕಡೆ ತಿರುಗಿ, ಅದ್ಯಕ್ಷರೇ, ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗಾಗಿ ಬೆಳಗ್ಗೆ 9 ಗಂಟೆಗೆ ಬಂದು ನೋಟೀಸ್ ಕೊಟ್ಟಿದ್ದೇವೆ, ಹಾಗಾಗಿ ಪ್ರಶ್ನೋತ್ತರ ವೇಳೆಯನ್ನು ಬದಿಗೊತ್ತಿ ಕಾನೂನು ಸುವ್ಯವಸ್ಥೆ ವಿಷಯದ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡಿ ಅನ್ನುತ್ತಾರೆ