ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಮಾರ್ಚ್ 17ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಚಿತ್ರದ ಆಡಿಯೋ ಲಾಂಚ್ ನಡೆಯಿತು. ಉಪೇಂದ್ರ ಅವರು ವೇದಿಕೆ ಮೇಲೆ ‘ಕಬ್ಜ’ ಚಿತ್ರದ ಡೈಲಾಗ್ ಹೇಳಿದರು. ‘ನಾನು ರಾಜ್ಯದ ಕಟ್ಟೋದು ಕತ್ತಿಗಳಿಂದಲ್ಲ ಕಣ್ರೋ.. ಅದನ್ನು ಹಿಡಿಯೋ ಕೈಗಳಿಂದ’ ಎಂದು ಉಪೇಂದ್ರ ಹೇಳುತ್ತಿದ್ದಂತೆ ಫ್ಯಾನ್ಸ್ ಖುಷಿಯಿಂದ ಕೂಗಿದರು.